ಪುತ್ತೂರು: ಬೆಂದ್ರತೀರ್ಥ ಸಮೀಪ ಸ್ಥಳೀಯ ನಿವಾಸಿಗಳು ನಿಲ್ಲಿಸಿದ್ದ ವಾಹನ ಗಳಿಗೆ ರಾತ್ರಿ ವೇಳೆ ಕಿಡಿಗೇಡಿಗಳು ಹಾನಿ ಮಾಡಿ, ದಾಂಧಲೆ ಗೈದಿರುವ ಘಟನೆ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ.
ಇರ್ದೆ ಗ್ರಾಮದ ಪೈಂತಿಮುಗೇರು, ಅಂಗರಾಜೆ ಸಹಿತ ನದಿ ಆಚೆಗಿರುವ ನಿವಾಸಿಗಳು ಬೈಲಾಡಿ ಸೀರೆ ಹೊಳೆಗೆ ಸೇತುವೆಯಿಲ್ಲದ ಕಾರಣ ಬೆಂದ್ರತೀರ್ಥ ಬಳಿ ತಮ್ಮ ವಾಹನಗಳನ್ನು ರಾತ್ರಿ ವೇಳೆ ನಿಲ್ಲಿಸುತ್ತಾರೆ. ಬುಧವಾರ ಇರ್ದೆ ಗ್ರಾಮದ ಪೈಂತಿಮುಗೇರು ನಿವಾಸಿ ಅಬ್ದುಲ್ ಕುಂಞÂ ಎಂಬವರ ಇಂಡಿಕಾ ವಿಸ್ಟಾ ಕಾರು, ಅವರ ಸಹೋದರ ಹಸೈನಾರ್ ಎಂಬವರ ರಿಕ್ಷಾ, ರವಿನಾಥ ಅಂಗರಾಜೆ ಹಾಗೂ ಅಶೋಕ ಅವರ ಆ್ಯಕ್ಟೀವಾ ಹೊಂಡಾ, ಅಶ್ರಫ್ ಹಾಗೂ ಶಶಿ ಆಚಾರ್ಯ ಎಂಬವರ ಬೈಕ್ ಸೇರಿದಂತೆ ಒಟ್ಟು 6 ವಾಹನಗಳನ್ನು ಕಿಡಿಗೇಡಿಗಳು ಪುಡಿ ಮಾಡಿ ದಾಂಧÀಲೆ ನಡೆಸಿದ್ದಾರೆ.
ಗುರುವಾರ ಬೆಳಿಗ್ಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಬ್ದುಲ್ ಕುಂಞÂಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಸಂಪ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No comments:
Post a Comment