Thursday, 21 August 2014

ಬಾಲಕನಿಗೆ ಬ್ಲಡ್ ಕ್ಯಾನ್ಸರ್: ನೆರವಿಗೆ ಮನವಿ

ವೇಣೂರು: ತೀರಾ ಬಡ ಕುಟುಂಬದ ಸಂಸಾರ. ಈ ಸ್ಥಿತಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದೆಂದರೆ ಕನಸಿನ ಮಾತೇ ಸರಿ. ಇಂತಹ ಸ್ಥಿತಿಯಲ್ಲಿ ಶಿಕ್ಷಣ ಹೊಂದಬೇಕೆನ್ನುವ ಆಶಾಗೋಪುರವನ್ನು ಕಟ್ಟಿಕೊಂಡು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಯ ಕನಸನ್ನೇ ನುಚ್ಚುನೂರು ಮಾಡಿದೆ ಬ್ಲಡ್ ಕ್ಯಾನ್ಸರ್ ಎಂಬ ಮಹಾಮಾರಿ. ಇಂತಹ ಕಠಿಣ ಪರಿಸ್ಥಿತಿಯ ಲ್ಲಿರುವ ಭಾಸ್ಕರ ಆಚಾರ್ಯ-ರತ್ನಾವತಿಯವರ ಪುತ್ರ ಸ್ವಸ್ತಿಕ್(15)ಗೆ ಬೇಕಾಗಿದೆ ದಾನಿಗಳ ಸಹಾಯಹಸ್ತ.
ವೇಣೂರಿನ ಅಂಡಿಂಜೆ ಗ್ರಾಮದ ಕಜೆ ಸ್ವರ್ಣಕೃಪಾ ಮನೆ ನಿವಾಸಿ ಭಾಸ್ಕರ ಆಚಾರ್ಯ-ರತ್ನಾವತಿಯವರ ಮೂವರು ಮಕ್ಕಳಲ್ಲಿ ಈತ ಎರಡನೆಯವನು. ಮೊದಲನೇ ಯವರು ಸ್ವಾತಿ ಮೇಲಂತಬೆಟ್ಟು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದರೆ, ಮೂರನೇಯವಳಾದ ಸ್ವರ್ಣ ಅಂಡಿಂಜೆ ಹಿ.ಪ್ರಾ. ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಭಾಸ್ಕರ ಆಚಾರ್ಯರವರು ಕೂಲಿ ಕೆಲಸ ಮಾಡುತ್ತಿದ್ದರೆ ತಾಯಿ ಬೀಡಿ ಕಟ್ಟುತ್ತಾ ಬಂದ ಅಲ್ಪ ಹಣದಿಂದ ದಿನ ಕಳೆಯುತ್ತಿದ್ದಾರೆ.
ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತಿದ್ದ ಸ್ವಸ್ತಿಕ್ ನನ್ನು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೊಳಪಡಿಸಿದಾಗ ಹೆತ್ತವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಮಗನ ಚಿಕಿತ್ಸೆಗಾಗಿ 9 ವರ್ಷಗಳಿಂದ ದಾನಿಗಳ, ಸ್ಥಳೀಯರ ಸಹಕಾರದೊಂದಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ರೋಗ ಸಂಪೂರ್ಣ ಗುಣಮುಖವಾಗಲು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಸಾಗಿಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಚಿಕಿತ್ಸೆಗೆ ಸುಮಾರು ರೂ. 12,50,000 ಖರ್ಚು ತಗಲಬಹುದೆಂದು ವೈದ್ಯರು ಸೂಚಿಸಿದ್ದಾರೆ. ಸ್ವಂತ ಸೂರೇ ಇಲ್ಲದ ಈ ಬಡ ಕುಟುಂಬ ಮತ್ತಿಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಬಡಪಾಯಿ ಹೆತ್ತವರು ಚಡಪಡಿಸುತ್ತಿದ್ದಾರೆ.
ಈಗಾಗಲೇ ಹಲವು ದಾನಿಗಳನ್ನು ಸಂಪರ್ಕಿಸಿರುವ ಹೆತ್ತವರು ಅಂದಾಜು ಒಂದು ಲಕ್ಷದಷ್ಟು ಹಣವನ್ನು ಕೂಡಿಸಿದ್ದಾರೆ. ತಂದೆ-ತಾಯಿಯ ಸಂಪಾದನೆಯಲ್ಲಿ ಕುಟುಂಬ ನಿರ್ವಹಣೆಯೇ ಅಸಾಧ್ಯವಾಗಿರುವಾಗ ಇಷ್ಟೊಂದು ಹಣ ಭರಿಸಲು ಸಾಧ್ಯವೇ? ಈ 15ರ ಹರೆಯದ ಹುಡುಗನ ಜೀವ ಉಳಿಸಲು ಸಾರ್ವಜನಿಕರು ತಮ್ಮಿಂದಾದ ದೇಣಿಗೆಯನ್ನು ನೀಡಲು ಈ ಬಡಪಾಯಿ ತಂದೆ-ತಾಯಿ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈತನಿಗೆ ಸಹಾಯ ಮಾಡಲು ಇಚ್ಚಿಸುವವರು ತಾಯಿ ರತ್ನಾವತಿಯವರ ಖಾತೆ ಸಂಖ್ಯೆ: 01502200089152 ಸಿಂಡಿಕೇಟ್ ಬ್ಯಾಂಕ್ ಮಹಾವೀರ ನಗರ, ವೇಣೂರು IಈSಅ ಓo: Sಙಓಃ0000150ಗೆ ತಮ್ಮ ಹಣವನ್ನು ಪಾವತಿ ಮಾಡಬಹುದಾಗಿದೆ. ಅಥವಾ ಭಾಸ್ಕರ ಆಚಾರ್ಯ ಸ್ವರ್ಣಕೃಪಾ ಮನೆ, ಅಂಡಿಂಜೆ ಮೊಬೈಲ್ ಸಂಖ್ಯೆ: 8762767743, 9740804022ಗೆ ಸಂಪರ್ಕಿಸಬಹುದಾಗಿದೆ.
ವಿಶ್ವಕರ್ಮ ಸಂಘಟನೆ ಗಮನಿಸಲಿ: ಸಂಘಟನೆಯ ಮೂಲಕ ವಿವಿಧ ರೀತಿಯಲ್ಲಿ ಗುರುತಿಸಲ್ಪಡುತ್ತಿರುವ ವಿಶ್ವಕರ್ಮ ಸಂಘಟನೆ ಬಡಪಾಯಿ ಕುಟುಂಬ ಸ್ವಸ್ತಿಕ್‍ನ ಚಿಕಿತ್ಸೆಗೆ ನೆರವಾಗಲಿ. ರೋಗ ಸಂಪೂರ್ಣ ಗುಣಮುಖವಾಗುವಲ್ಲಿ ಸಂಘಟನೆಯ ಪಾತ್ರ ಮಹತ್ವ ವಹಿಸಲಿ ಎಂಬುದು ಆಶಯ.

No comments:

Post a Comment

 
Support : Creating Website | Johny Template | Mas Template
Copyright © 2011. tryoutblog - All Rights Reserved
Template Created by Creating Website Published by Mas Template
Proudly powered by Blogger